ಎಳಹೊಟಿ ಬಿಡಿಸಿವುದು ಉಳವಿಯ ಚನ್ನಪ್ರಭುವಿಗಲ್ಲದೆ
ಅಳಿವರಿಗೆ ಯಾತಕ್ಕೊ ಎಳಹೊಟಿಯ ಮಾತು?
ತಿಳಿವರೆ ಹೇಳಿ, ಅವರ ಎಳಹೊಟಿಯ ಮಾಡುವುರು ಉಂಟೆ?
ಕೆಳಗುಂದಿ ಶಿವಚಾರ ಕುಲಾಚಾರ ಎಂದಲ್ಲಿ,
ಎತ್ತು ತೊತ್ತಾದರೂ ಬಳಲಿತ್ತು; ಆ ಕಟ್ಟಳೆ ಸಾವಿರ ವರುಷ.
ಶಕ್ತಿ ಲಕ್ಷಣಕ್ಕೆ ಇಳೆಯೊಳಗೆ ಬೆಡಗು,
ಆರಾರಿಗೂ ಸಿಕ್ಕದ ಮಾತು.
ತಳಹುತಾರೆ ತಮ್ಮ ಮನದೊಳು ತಮ್ಮ ತಾವೆ
ಸುಳುಹಿನ ಶುಭಸೂಚನೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Eḷahoṭi biḍisivudu uḷaviya cannaprabhuvigallade
aḷivarige yātakko eḷahoṭiya mātu?
Tiḷivare hēḷi, avara eḷahoṭiya māḍuvuru uṇṭe?
Keḷagundi śivacāra kulācāra endalli,
ettu tottādarū baḷalittu; ā kaṭṭaḷe sāvira varuṣa.
Śakti lakṣaṇakke iḷeyoḷage beḍagu,
ārārigū sikkada mātu.
Taḷahutāre tam'ma manadoḷu tam'ma tāve
suḷuhina śubhasūcane kāṇā
ele nam'ma kūḍala cennasaṅgamadēvayya.