Index   ವಚನ - 380    Search  
 
ಕುಲವೆಂದು ನುಡಿವ ಹೊಲೆಯರೆ, ಛಲ ನಿಮಗ್ಯಾಕೆ ಬಿಡಿ. ಕೂಡಿ ತರಿಯ ಹೊರಗಿರಿಸಿದರೆ ನಾಚರು ಪಾಂಚಾಳರು. ಪವಾಡದ ಮಾಡುವುದು, ಕೊಲೆ ಬಂತು ಕುಮಾರಸ್ವಾಮಿ[ಗೆ]. ಹೊಲಗೇರಿ ಒಳಗೆ ಕಟುಕೇರಿ ಹೊರಗೆ. ಬಾಲವ ಮುರಿಯಿತ್ತು ಬ್ರಹ್ಮ ವಿಷ್ಣುವಿನ ಅವತಾರ. ಸಂದು ಸಲೆ ಮೊರೆಹೋಗಿ ಸಮಯವಿರೊಧವ ಬಿಡಿ. ಕೀಲದ ಗುತ್ತಿಗೆ, ವಂಶವಾಹಿ ಕೆಮ್ಮನೆ ಕೆಡೆದು, ತಲೆತಲೆ ನಡೆಯುತ್ತಿದ್ದ, ಹಿರಿಯ ಭಕ್ತರ ಮನೆಗೆ ಕಿರಿಯ ಭಕ್ತ; [ಕಿರಿಯ ಭಕ್ತರ ಮನೆಗೆ ಹಿರಿಯ ಭಕ್ತ] ತಲೆ ಮೇಲುಕೆಳಗೆ ಪಾದ ಹೊಲೆಯಳಿದು ಪುಣ್ಯಕ್ಷೇತ್ರ ಎನಿಸುವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.