Index   ವಚನ - 6    Search  
 
ನಿನ್ನ ಸದ್ರೂಪವೆ ಗುರು, ನಿನ್ನ ಮೂರ್ತಿಯೆ ಲಿಂಗ, ನಿನ್ನಚಿದ್ರೂಪವೆ ಗುರು, ನಿನ್ನಾನಂದವೆ ಜಂಗಮ, ನಿನ್ನ ಪರಮಾನಂದವೆ ಪಾದೋದಕ, ನಿನ್ನ ಪರಮ ಪ್ರಕಾಶವೆ ವಿಭೂತಿ, ನಿನ್ನ ಮೊಗವೆ ರುದ್ರಾಕ್ಷಿ, ನಿನ್ನ ನಾಮವೆ ಷಡಕ್ಷರಿಮಂತ್ರ, ಇಂತನಾದಿ ಪರಶಿವನಿಂದಾದಷ್ಟಾವರಣ ವೀರಶೈವಾಚಾರಸಂಪದವಯ್ಯ ಶಾಂತವೀರೇಶ್ವರಾ