ಆದಿ ಮಧ್ಯಾವಸಾನವಿಲ್ಲದಂಥಾ
ಆಕಾಶ ತತ್ವವನು ಮೀರಿದಂಥಾ
ಅಜ್ಞಾನ ಮಾಯಾ ಕಾಳಿಕೆಯ ಪೊದ್ದದಂಥಾ
ಧ್ಯಾನ ಜ್ಞಾನ ಮನಸ್ಸು ಇಲ್ಲದಂಥಾ
ತಾನೆ ಸರ್ವಕ್ಕಾಶ್ರಯವಾಗಿ ತನಗೊಂದಾಶ್ರಯವಿಲ್ಲದಂಥಾ
ವಸ್ತುವೆ ಶೂನ್ಯಲಿಂಗವೆಂದು ‘ವೀರಾಗಮ’ ಪೇಳ್ಪುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ādi madhyāvasānavilladanthā
ākāśa tatvavanu mīridanthā
ajñāna māyā kāḷikeya poddadanthā
dhyāna jñāna manas'su illadanthā
tāne sarvakkāśrayavāgi tanagondāśrayavilladanthā
vastuve śūn'yaliṅgavendu ‘vīrāgama’ pēḷpudayya
śāntavīrēśvarā