Index   ವಚನ - 48    Search  
 
ಕಪಿಲ ಮುನಿ ಪ್ರಣೀತವಾದ ನಿರೀಶ್ವರತ್ವವು ಪತಂಜಲಿ ಪ್ರಣಿತವಾದ ಯೋಗಶಾಸ್ತ್ರವು ವಾಸುದೇವ ಪ್ರಣೀತವಾದ ವೈಷ್ಣವಾಗಮವು ಶಿವಪ್ರಣಿತವಾದ ಶಿವಾಗ[ಮ]ವು ಹಾಂಗೆಯೆ ‘ನಿಶ್ವಸಿತಮಸ್ಯ ವೇದ’ ಎಂಬ ಶ್ರುತಿಯುಂಟಾಗಿ ಶಿವನ ನಿಶ್ವಾಸ ಮಾರುತ ಸಂಭವವಾದ ವೇದಂಗಳು ಪ್ರಮಾಣಂಗಳಾಗಿರ್ದ ‘ಸಂಖ್ಯಯೋಗ ಪಶುಪತಿ ಮತಂ ವೈಷ್ಣವಮಿತಿ’ ಎಂದು ‘ಮಹಿಮ್ನಸ್ತವ’ ಈ ಸಿದ್ಧಾಂತಗಳು ತರ್ಕ ಯುಕ್ತಿಗಳಿಂದ ಕೆಡಲು ಯೋಗ್ಯಂಗಳವಲ್ಲವಯ್ಯ ಶಾಂತವೀರೇಶ್ವರಾ ಸೂತ್ರ: ಆ ಸಿದ್ಧಾಂತ ಬೇದಂಗಳೊಳಗೆ ವೇದ ಮುಖ್ಯವೆಂದು ತೋರುತಿರ್ದಪಂ.