‘ವೀರ’ ಶಬ್ದ ಪೂರ್ವಕವಾದ ಶೈವರಿಂದೆ
‘ವೀರ’ ಶಬ್ದ ಪೂರ್ವಕವಾದ ಮಾಹೇಶ್ವರರಿಂದೆಯೂ
ಒಳ ಹೊರ ಕ್ರಮದ ದೆಸೆಯಿಂದೆ
ಶಿವಲಿಂಗಾರ್ಚನೆಯ ಮಾಡಲು ಯೋಗ್ಯವು.
ನಿಃಕಲನಾದ ಶಿವನು ಸಕಲನಾದ ಮಾಹೇಶ್ವರನು
ಹೀಗೆಂದು ‘ಶಿವಃ ಶೂಲಿ ಮಾಹೇಶ್ವರಃ’ ಎಂಬ ಅಭಿಧಾನವ
ಗುಣ ಪಾಠದಲ್ಲಿ ಹಿಂಗಿ ಮಿಗಿಲಾಗಿ ಭಿನ್ನವಾಗುತ್ತಿರರು.
ಹಾಂಗೆ ‘ಶಿವ’ ಸಂಬಂಧವಾದ ವೀರಶೈವರು
‘ಮಾಹೇಶ್ವರ’ ಸಂಬಂಧವಾದ ವೀರಮಾಹೇಶ್ವರರಾಯಿತ್ತಾಗಿ
ಭಿನ್ನವಾಗುತ್ತಿಹರಯ್ಯ
ಶಾಂತವೀರೇಶ್ವರಾ
ಸೂತ್ರ: ಬಳಿಕ ಅ ಅರ್ಥವನೆ ವಿಶ್ಲೇಷಿಸುತ್ತಿರ್ದಪಂ.