Index   ವಚನ - 74    Search  
 
ಅನಾದಿ ಭಕ್ತನ ಹೃದಯಲ್ಲಿ ಅನಾದಿ ಲಿಂಗವಿಹುದು, ಆ ಅನಾದಿ ಜಂಗಮದ ಮುಕುಟದಲ್ಲಿ ಶೂನ್ಯಲಿಂಗವು ಹುಟ್ಟಿತ್ತು. ಆ ಶೂನ್ಯ ಲಿಂಗದಿಂದ ಚಿದಾಕಾಶ ಹುಟ್ಟಿತ್ತು, ಆ ಚಿದಾಕಾಶದಿಂದ ಚಿಚ್ಛಕ್ತಿ ಹುಟ್ಟಿತ್ತು, ಆ ಚಿಚ್ಛಕ್ತಿಯಿಂದ ಪರಾಶಕ್ತಿ ಹುಟ್ಟಿತ್ತು, ಆ ಪರಾಶಕ್ತಿಯಿಂದ ಆದಿಶಕ್ತಿ ಹುಟ್ಟಿತ್ತು, ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಹುಟ್ಟಿತ್ತು, ಆ ಇಚ್ಛಶಕ್ತಿಯಿಂದ ಜ್ಞಾನಶಕ್ತಿ ಹುಟ್ಟಿತ್ತು, ಆ ಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಹುಟ್ಟಿತ್ತು, [ಆ ಕ್ರಿಯಾಶಕ್ತಿಯಿಂದ ಶೂನ್ಯಲಿಂಗ ಹುಟ್ಟಿತ್ತು] ಆ ಶೂನ್ಯಲಿಂಗದಂತರಂಗದಲ್ಲಿ ನಿಃಕಲಲಿಂಗ ಹುಟ್ಟಿತ್ತು ಆ ನಿಃಕಲ ಲಿಂಗದಂತರಂಗದ ಮಧ್ಯದಲ್ಲಿ ಸರ್ವಾಧಾರವಾದ ಮಹಾಲಿಂಗ ಹುಟ್ಟಿತ್ತು, ಆ ಮಹಾಲಿಂಗದಿಂದ ಪರಶಕ್ತಿ ಹುಟ್ಟಿತ್ತು, ಮೂಲಮಂತ್ರ ಸ್ವರೂಪವಾದ ಪರಶಕ್ತಿ ಎಂಬ ಹೆಸರುಳ್ಳ ವಿಶ್ವಕ್ಕೆ ಮೂಲಸ್ತಂಭವಾದ ಪರಶಿವಲಿಂಗಕ್ಕೆ ನಮಸ್ಕಾರವಯ್ಯ [ಶಾಂತವೀರೇಶ್ವರಾ]