Index   ವಚನ - 73    Search  
 
ಪಿಂಡಲಕ್ಷಣವೆಂತೆನೆ: ಅನಾದಿ ಭಕ್ತ ಹೃದಯ ಜಂಗಮ ಮಕಟ ಶೂನ್ಯಲಿಂಗ ಚಿದಂಬರೆ ಬಸವಾಕ್ಷರತ್ರಯ ಪಂಚಸಂಜ್ಞೆ ಪಂಚ ಲಕ್ಷಣವಾದಿಯಾದಂತರ್ಭಾವದ ಚಿದಂಗಗಳೀಗ ಶೂನ್ಯಾದಿ ಬ್ರಹ್ಮಾಂತಮಾದ ಸೃಷ್ಠಿ ಪಂಚನಾದ ಪಂಚಪ್ರಾಣವ ಪಂಚಕಲೆ ಪಂಚಶಕ್ತಿ ಪಂಚಸಾದಾಖ್ಯ ಮೊದಲಾದ ತನುಕಾಂತಿಯ ಚಿಹ್ನೆಗಳೀಗ ಬ್ರಹ್ಮಾದಿ ಶಿವಾಂತಮಾದ ಸೃಷ್ಟಿ. ಪಂಚಾಕ್ಷರ ಪಂಚಮೂರ್ತಿ ಪಂಚಮುಖ ಈಶ್ವರಾಷ್ಟಕ ಮಹೇಶ್ವರ ಪಂಚವಿಂಶತಿ ಏಕಾದಶ ರುದ್ರತ್ರಯಾವಹ, ಹಿರಣ್ಯಗರ್ಭ ಹಿರಣ್ಮೂರ್ತಿ ಮೊದಲಾದ ಸಾಕಾರದ ವಿಗ್ರಹದ ಚಿಹ್ನಂಗಳೀಗ ಶಿವಾದಿ ರುದ್ರಂತಮಾದ ಸೃಷ್ಟಿ. ಅಜ ಹರಿ ದೇವೇಂದ್ರ ಮುನಿವರ್ಗ ಮುಂತಾದ ಸಾಲೋಕ್ಯಾದಿ ಪದತ್ರಯದವರುಗಳ ರುದ್ರಾದಿ ಬ್ರಹ್ಮಂತಮಾದ ಸೃಸ್ಟಿ ದೇವಜಾತಿ ಮಾನವ ಚತುರ್ದಶ ಭುವನ ಮುಂತಾದ ಜಗತ್ತೀಗ ಬ್ರಹ್ಮಾದಿ ತೃಣಾಂತಮಾದ ಸೃಷ್ಟಿ. ಇಂತಿದು ಪಿಂಡ ಲಕ್ಞಣವಯ್ಯ ಶಾಂತವೀರೇಶ್ವರಾ