ಹೃದಯದ ಕಳಂಕವನ್ನು ತೊಲಗಿಸಿಕೊಂಡು ನಿತ್ಯವಾದಾತ್ಮನಿಗೆ ಅನಿತ್ಯವಾದ
ದೇಹದ ವಿವೇಕವುಳ್ಳ ಪಿಂಡಜ್ಞಾನಿಗೆ
ಪೂರ್ವಜನ್ಮದ ವಾಸನೆಯು ಬಲದಿಂದ ಸಂಸಾರದ ಬಿಡುಗಡೆಯ
ಬುದ್ಧಿ ಉಂಟಾಗುವುದು.
ಸತಿಸುತರು ಮೊದಲಾದವರರಿಂದ ಹುಟ್ಟಿದ ಇಹಲೋಕದ
ಕ್ಷಣಿಕವಾದ ಸುಖದಲ್ಲಿಯು ಕ್ಷಯಿತ್ವಾದಿ ಗುಣದೊಡನೆ ಕೂಡಿದ
ಸ್ವರ್ಗಭೋಗ್ಯವಾದೊಡೆಯು ಅದರ ಬಯಕೆಯು
ಯಾವ ವಿವೇಕಿಗೂ ಇಲ್ಲವೆಂದರ್ಥವಯ್ಯ
ಶಾಂತವೀರೇಶ್ವರಾ
ಸೂತ್ರ: ಬಳಿಕ ಜನನ ಮರಣಂಹಳಿಂದಾದ ದುಃಖವನು ಪೇಳ್ವೆನದೆಂತೆಂದೊಡೆ: