ಮತ್ತ ಆ ಇಷ್ಟಲಿಂಗದ ಉತ್ಕರ್ಷವೆಂತೆಂದೊಡೆ:
ಜ್ಞಾನಿಯು ಅಂಗದಲ್ಲಿಯ ಯಜ್ಞ ಸೂತ್ರವನು ಬಿಟ್ಟು
ಶಿಖಿ ಸಹವಾಗಿ ಬೋಳಿಸಿ ನಾಶರಹಿತವಾದ ಪರಶಿವ ತತ್ತ್ವವನು
ಶಿವ ಸೂತ್ರವೆಂದು ಧರಿಸತಕ್ಕದು.
ಸೂಚನೆಯ ದೆಸೆಯಿಂದ ಸೂತ್ರವು ಎಂದು ಹೇಳುವರು.
ಸೂತ್ರವೆಂಬ ಹೆಸರುಳ್ಳ ಪರಬ್ರಹ್ಮವೆಂಬ ಪದವು
ಆ ಸೂತ್ರಾತ್ಮಕ ಲಿಂಗದ ಧಾರಣದಿಂದ ಉಚ್ಚಿಷ್ಟ ಸೂತಕವಿಲ್ಲ;
ಅಪವಿತ್ರವು ಆಗದು.
ಆ ಪರಬ್ರಹ್ಮವೆಂಬ ಸೂತ್ರವನು ಆವನು ತಿಳಿಯುತ್ತಾನೆಯೋ
ಆತನು ಬ್ರಾಹ್ಮಣನು ಎಂದು ‘ಬ್ರಹ್ಮೋಪನಿಷತ್ತು’ ಹೇಳುತ್ತಿಹುದ್ಯಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Matta ā iṣṭaliṅgada utkarṣaventendoḍe:
Jñāniyu aṅgadalliya yajña sūtravanu biṭṭu
śikhi sahavāgi bōḷisi nāśarahitavāda paraśiva tattvavanu
śiva sūtravendu dharisatakkadu.
Sūcaneya deseyinda sūtravu endu hēḷuvaru.
Sūtravemba hesaruḷḷa parabrahmavemba padavu
ā sūtrātmaka liṅgada dhāraṇadinda ucciṣṭa sūtakavilla;
apavitravu āgadu.
Ā parabrahmavemba sūtravanu āvanu tiḷiyuttāneyō
ātanu brāhmaṇanu endu ‘brahmōpaniṣattu’ hēḷuttihudyaya
śāntavīrēśvarā