Index   ವಚನ - 124    Search  
 
ಬಳಿಕ ಆ ಶಿಷ್ಯನಿಗೆ ಮಾಡುವಾಜ್ಞೆಯನು ಸೂತ್ರತ್ರಯದಿಂದ ಪೇಳುತ್ತಿರ್ದನು: ‘ಎಲೆ ಶಿಷ್ಯನೆ ನಿನ್ನ ಈ ಇಷ್ಟಲಿಂಗವನು ಪ್ರಾಣದೋಪಾದಿಯಲ್ಲಿ ಧರಿಸಲು ಯೋಗ್ಯವು, ಒಂದೆಡೆಯಲ್ಲಿ ಇಟ್ಟು ದೇಹದಿಂದ ಒಂದು ಕ್ಷಣವಾದರೂ ತೊಲಗಿಸಬೇಡ, ಏನೆ ಆದರೂ ಅಂಗದಿಂದ ಲಿಂಗವು ಬೇರಾಗಬಾರದಯ್ಯ ಶಾಂತವೀರೇಶ್ವರಾ