Index   ವಚನ - 150    Search  
 
ಬಳಿಕ ಪಾಶ ವಿಮೋಚನಾರ್ಥವಾಗಿ ಈ ಜ್ಯೋತಿರ್ಲಿಂಗವನೆ ಧ್ಯಾನಿಸುವುದಯ್ಯ. ಮತ್ತು ಬಾಹ್ಯಲಿಂಗ ಧಾರಣವನು ಪೇಳುತ್ತಿರ್ಪನೆಂತೆನೆ, ಆ ಜ್ಯೋತಿರ್ಲಿಂಗವನು ಹೃದಯದಲ್ಲಿ ಧರಿಸಲು ಸಮರ್ಥನಿಲ್ಲದಿರ್ದೊಡೆಯು ಸಮರ್ಥನಾಯಿತ್ತಾದೊಡೆ ಸ್ಪಟಿಕ ಶಿಲಾದಿ ನಿರ್ಮಿತವಾದ ಬಾಹ್ಯಲಿಂಗವನಾದರೂ ಹೃದಯಕಮಲಾಶ್ರಿತಮಾಗಿ ಜ್ಯಾತಿರ್ಮಯವಾದ ಮಹಾಲಿಂಗ ಸ್ವರೂಪವುಳ್ಳದೆಂದು ನಿಶ್ಚಯ ಬುದ್ಧಿಯಿಂದ ಧರಿಸುವದಯ್ಯ ಶಾಂತವೀರೇಶ್ವರಾ