ಶಿವಭಕ್ತಿಯಿಂದ ವಿಶೇಷವಾಗಿ ಭಾವಿಸುವ
ಸ,ಮಸ್ತವಾದ ಮಹಾಲಕ್ಷ್ಮೀ ಮೊದಲಾಗುಳ್ಳ
ಶಕ್ತಿದೇವತೆಗಳು ಶಿವಲಿಂಗವನು ಲಲಾಟದ ಊರ್ಧ್ವ
ಭಾಗವಾದ ಶಿರಸ್ಸುಗಳಲ್ಲಿ
ಆವಾಗಲು ಧರಿಸಿರುವರು,
ನಾರಾಯಣನು ಉರಸ್ಥಲದಲ್ಲಿ ನೀಲದ ಲಿಂಗವನು ಧರಿಸಿ,
ಬ್ರಹ್ಮನು ಮಸ್ತಕದಲ್ಲಿ ಸ್ಪಟಿಕದ ಲಿಂಗವನು ಧರಿಸಿ,
ದೇವೆಂದ್ರನು ವಜ್ರದ ಲಿಂಗವನು ಧರಿಸಿ
ತಮ್ಮ ತಮ್ಮ ಪದವಿಯನು ಪಡೆದರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivabhaktiyinda viśēṣavāgi bhāvisuva
sa,mastavāda mahālakṣmī modalāguḷḷa
śaktidēvategaḷu śivaliṅgavanu lalāṭada ūrdhva
bhāgavāda śiras'sugaḷalli
āvāgalu dharisiruvaru,
nārāyaṇanu urasthaladalli nīlada liṅgavanu dharisi,
brahmanu mastakadalli spaṭikada liṅgavanu dharisi,
dēvendranu vajrada liṅgavanu dharisi
tam'ma tam'ma padaviyanu paḍedarayya
śāntavīrēśvarā