ಭಸ್ಮಧಾರಣ ವಿಧಿಯನ್ನು
ಪಂಚಸೂತ್ರಂಗಳಿಂದ ಹೇಳುತಿರ್ದಪೆ[ನು],
ಕಲಶ ಮೊದಲಾದ ಭಸ್ಮಪಾತ್ರೆಗಳಲ್ಲಿರುತಿರ್ದ
ಕಲ್ಪಾನುಕಲ್ಪಾದಿಯಾದ ಭಸ್ಮಂಗಳಲ್ಲಿ
ಒಂದು ಭಸ್ಮವನು ತೆಗೆದುಕೊಂಡು
ತ್ರಿಸಂಧ್ಯಾ ಕಾಲದಲ್ಲಿಯಾದರೂ,
ಕಾಲೋಚಿತವಾಗಿಯಾದರೂ
ಭಸ್ಮಸ್ನಾನವ ಮಾಡುವದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Bhasmadhāraṇa vidhiyannu
pan̄casūtraṅgaḷinda hēḷutirdape[nu],
kalaśa modalāda bhasmapātregaḷallirutirda
kalpānukalpādiyāda bhasmaṅgaḷalli
ondu bhasmavanu tegedukoṇḍu
trisandhyā kāladalliyādarū,
kālōcitavāgiyādarū
bhasmasnānava māḍuvadayya
śāntavīrēśvarā