Index   ವಚನ - 181    Search  
 
ಆಷ್ಟಾದಶವರ್ಮನವಗ್ರಹಿಸಿದ ಷಡಧ್ವಶುದ್ಧಿಗೋಸುಗ ಮಂಡಲತ್ರಯಸಹಿತ ನವಚಕ್ರಾಶ್ರಿತವಾದ ಅಗ್ನಿರಿತಿ ಭಸ್ಮಮಂತ್ರ ಅಪೂರ್ವೇತಿ ಮಂತ್ರ ಆಪೂರ್ಜಾವ ಮಂತ್ರದಿಂದ ಶಿವಶಕ್ತಿ ತೇಜೋರೂಪವಾದ ಸಜಲ ಭಸ್ಮದಿಂದೆ ವರ್ಣತ್ರಯ ಭುವನತ್ರಯ ದೇವತಾತ್ರಯ ರೂಪವಾದ ತ್ರಿಪುಂಡ್ರ ಧಾರಣಾ ಸ್ಥಾನಂಗಳನು ಸೂತ್ರತ್ರಯದಿಂದ ಪೇಳುತ್ತಿರ್ದಪನು. ಉದಕದೊಡನೆ ಕೂಡಿ ವರ್ತಿಸುತಿರ್ದ ಭಸ್ಮದಿಂದೆ ದೇಹದಲ್ಲಿ ಹದಿನೈದು ಸ್ಥಾನಂಗಳಲ್ಲಿ ಸಾಧಕ ಶ್ರೇಷ್ಠನು ತ್ರಿಪುಂಡ್ರವನು ಯಾವಾಗಲು ತ್ರಿಯಾಯಷ ತ್ರಯಂಬಕ ಪಂಚಾಕ್ಷರ ಪ್ರಣವ ಮಂತ್ರ ಉಚ್ಚಾರಣೆಯಿಂದ ಧರಿಸುವದಯ್ಯ ಶಾಂತವೀರೇಶ್ವರಾ