ಮೂಡಲ ಮುಖವುಳ್ಳವನಾಗಿಯಾದರೂ
ಬಡಗಲ ಮುಖವುಳ್ಳವನಾಗಿಯಾದರೂ
ಗುರೂಕ್ತ ವಿಧಿಯಿಂದೆ
ಪ್ರಾಣಾಯಾಮ ಮಂತ್ರದಿಂದ
ಹೃದಯ ಕಲಮದಲ್ಲಿ ತ್ರಯಂಬಕನೆಂದೊಡೆಂತೆನೆ:
ಮಂಡಲತ್ರಯ ಗುಣತ್ರಯ ದೇವತಾತ್ರಯ
ಮೊದಲಾದ ತ್ರಿವಸ್ತುಗಳಿಗೆ ತಂದೆಯಾದ,
ಸಮಸ್ತಾಭರಣಗಳಿಂದ ಕೂಡಿದ,
ಚಂದ್ರಮಂಡಲವು ಶಿರಸಿನಲ್ಲುಳ್ಳ,
ಪಾರ್ವತಿಯೊಡನೆ ಕೂಡಿರುವ
ಪರಮೇಶ್ವರನನು ಧ್ಯಾನಿಸುತ್ತ
ಅನ್ಯ ಚಿತ್ತವಿಲ್ಲದೆ ಇದ್ದಾತನು
ಶಿವಸ್ವರೂಪವುಳ್ಳ ಈ ಮಂತ್ರವು ಜಪಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mūḍala mukhavuḷḷavanāgiyādarū
baḍagala mukhavuḷḷavanāgiyādarū
gurūkta vidhiyinde
prāṇāyāma mantradinda
hr̥daya kalamadalli trayambakanendoḍentene:
Maṇḍalatraya guṇatraya dēvatātraya
modalāda trivastugaḷige tandeyāda,
samastābharaṇagaḷinda kūḍida,
candramaṇḍalavu śirasinalluḷḷa,
pārvatiyoḍane kūḍiruva
paramēśvarananu dhyānisutta
an'ya cittavillade iddātanu
śivasvarūpavuḷḷa ī mantravu japisuvudayya
śāntavīrēśvarā