ಮಂತ್ರೋಚ್ಚಾರವು ಮೂರು ಪ್ರಕಾರವಾದದ್ದು.
ಅವು ಯಾವುವೆಂದರೆ; ವಾಚಿಕ, ಉಪಾಂಶು,
ಮಾನಸವೆಂದು ಹೇಳುವುರ, ಯಾವುದಾನೊಂದು
ಮಂತ್ರ ಉಚ್ಚಾರವಾದರೆ
ವರ್ಗ ಸಂತಾನವನು ಮೀರದೆ
ಮನ ವಚನ ಕಾಯ ಜನ್ಯವಾದ
ಸರ್ವ ಪಾಪವನು ತೊಲಗಿಸುತ್ತದೆ,
‘ವಾಚಿಕ ಜಪ’ ವೆಂದು ಅರಿಯಲು ಯೋಗ್ಯವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mantrōccāravu mūru prakāravādaddu.
Avu yāvuvendare; vācika, upānśu,
mānasavendu hēḷuvura, yāvudānondu
mantra uccāravādare
varga santānavanu mīrade
mana vacana kāya jan'yavāda
sarva pāpavanu tolagisuttade,
‘vācika japa’ vendu ariyalu yōgyavayya
śāntavīrēśvarā