ಬಳಿಕ ‘ಓಂ ಚೈತನ್ಯ ಸ್ವರೂಪಾಯ
ಪ್ರಣವಾತ್ಮ ಕಾಯ ಮನಃ’ ಎಂಬ ಮಂತ್ರದಿಂ ಸ್ಥೂಲಾದ ಮಣಿಗಳನಾ
ಸೂತ್ರದ ಮೂಲದಲ್ಲಿ ಸೂಕ್ಷ್ಮವಾದ ಮಣಿಗಳನದರಗ್ರದಲ್ಲಿ
ಗೋಪುಚ್ಚದಾಕಾರವಪ್ಪಂತೆ ಸೇರುವೆಯರಿದು
ಮುಖಮುಖಂಗಳಂ ಸಂಯೋಗಿಸಿ ಸರಂಗೊಳಿಸಿ
ಮೇಲೆ ಮಣಿಗಳನೊರಸದಂತೆ
‘ಓಂ ಬ್ರಹ್ಮರೂಪಾಯ ಸಯಂ ಜಾನೋ ನಮಃ’ ಎಂಬ
ಮಂತ್ರದಿಂದ ಎರಡು ಸುತ್ತಿನ ಗಂಟುಗಳನಿಕ್ಕಿ ಬಿಗಿದು ಮೇಲೆ
ಮೂಲಾಗ್ರಂಗಳನೊಂದುಗೂಡಿ
ಬೇರೆ ಗಣನೆಯೊಳಗಲ್ಲದೊಂದು ಮಣಿಯನು
‘ಓಂ ಶಿವಾಯ ಮಧ್ಯಸ್ಥಿತಾಯ ರೂಪಾಯ ನಮಃ’
ಎಂಬ ಮಂತ್ರದಿಂದ ಮೇರುವೆಂದು ಕಲ್ಪಿಸಿ
ಪೋಣಿಸುತ್ತದರೆ ಮೇಲೆರೆಡು ಸುತ್ತಿನ ಗಂಟನಿಕ್ಕಿ ಬಂಧಿಸಿ
ಜಪಮಾಲಿಕೆಯನಿಂತು ಸರಂಗೊಳಿಸುವದಯ್ಯ
ಶಾಂತವೀರೇಶ್ವರಾ