Index   ವಚನ - 278    Search  
 
ಬಳಿಕ ತಾನು ಜಪಂಗೈಯ್ವಲ್ಲಿ ಮೊದಲು ಜಪ ಮಾಲಿಕೆ ಜಲ ಪುಷ್ಪ ಗಂಧಂಗಳಿಂದರ್ಘ್ಯಮಂ ಶುಕ್ತಿ ಮುದ್ರೆಯಿಂ ಮಂತ್ರ ಸಹಿತವಾಗಿ ಕೊಟ್ಟು ಮೇಲಾ ಜಪ ಮಾಲಿಕೆಯ ಸ್ಥೂಲಾದಿ ಸೂಕ್ಷ್ಮಾಂತಮಾಗಿ ಜಪಂಗೈಯ್ವದೆ ‘ಉತ್ಪತ್ಯ ಸ್ಥಿತಿ’ ಸೂಕ್ಷ್ಮಾದಿ ಸ್ಥೂಲಾದಿ ಸೂಕ್ಷ್ಮಾಂತುಮಾಗಿ ಜಪಿಸುವದೆ ‘ಸಂಹಾರ’ವೆಂದರಿದು ಪರದೃಷ್ಠಿಗೋಚರಮಾಗದಂತೆ ಶೀಘ್ರವಲ್ಲದೆ ಮಂತ್ರವಲ್ಲದೆ ಪ್ರತ್ಯೇಕ ಮಣಿಗೊಮ್ಮಮ್ಮೆ ಮಂತ್ರೋಚ್ಚಾರಣದಿಂ ಜಪಿಸುವಲ್ಲಿ ಪ್ರಮಾದವಶದಿಂ ಮಾಲಿಕೆ ಪತನಮಾಗೆ ಮಂತ್ರಹಾನಿಯಾಗುವದಾಗಿ ಮತ್ತೆ ಮೊದಲಿಂ ಪ್ರಾರಂಭಿಸಿ ಮೇರುವನುಲ್ಲಂಘಿಸದೆ ಪ್ರದಕ್ಷಿಣಮಾಗಿ ತಿರುಹಿಕೊಂಡು ನಮಸ್ಕರಿಸಿ ಮೇಲೆ ಮೊದಲಿನಂತೆ ಪ್ರಾರಂಭಿಸುತ್ತಿಂತು ತನ್ನ ನೇಮದ ಜಪ ಸಮಾಪ್ತಿಯಾದ ಮೇಲೆಯೂ ಜಪಮಾಲಿಕೆಗರ್ಘ್ಯಮಂ ಕೊಟ್ಟು ವಾಮಹಸ್ತದಿಂದ ಜಪಮಾಲೆಕೆಯಂ ಮುಟ್ಟದೆ ಕಂಠಾದಿಗಳಲ್ಲಿ ಧರಿಸದೆ ಜಪ ಕಾಲದಲ್ಲಿಯೆ ಜಪಂಗೈದು ಸದಾ ಶುದ್ಧೆ ಸ್ಥಳದಲ್ಲಿರಿಸಬೇಕೆಂಬುದನಂಗೀಕರಸುವುದಯ್ಯ ಶಾಂತವೀರೇಶ್ವರಾ