Index   ವಚನ - 279    Search  
 
ಬಳಿಕ, ವಂಶಾಸನದಿಂ ದರಿದ್ರ ಪಾಷಾಣಾಸನದಿಂ ವ್ಯಾಧಿ ಭೂಮ್ಯಾಸನದಿಂ ದುಃಖ ಮಂತ್ರಹಾನಿ ದಾರುಕಾಸನದಿಂ ದುರ್ಭಾಗ್ಯ, ವ್ಯಾಧಿ ತೃಣಾಸನದಿಂ ಯಶೋಹಾನಿ ಪಲ್ಲವಾಸನದಿಂ ಚಿತ್ತ ವಿಭ್ರಾಂತಿ ಕೃಷ್ಣಾಜೀನಾಸನದಿಂ ಜ್ಞಾನವೃದ್ಧಿ ವ್ಯಾಘ್ರ ಚರ್ಮಾಸನದಿಂ ಮೋಕ್ಷ ಲಕ್ಷ್ಮಿ ವಸ್ತ್ರಾಸನದಿಂ ವ್ಯಾಧಿ ನಿವೃತ್ತಿ, ಕಂಬಲಾಸನದಿಂ ಸೌಖ್ಯತೈಕರ್ಷ ವಸ್ತ್ರಾಸವನೆ ಅವಿಚಾರ ಕ್ರಿಯೆ ಶೂಭ್ರ ವಸ್ತ್ರಾಸನವೆ ಶಾಂತ್ಯಾದಿ ವಿಧಿಗೆ ಚಿತ್ರ ಕಂಬಲಸನವೆ ಸರ್ವಾರ್ಥ ಸಿದ್ಧಿಗಳಹವೆಂದು ಪೀಠಂಗಳು ಕುರುಹಿಟ್ಟು ಬಳಿಕ ಎಂಬತ್ತು ನಾಲ್ಕು ಆಸನಂಗಳೋಳಗೆ ಸಿದ್ಧಾಸನ ಪದ್ಮಾಸನ, ಸ್ವಸ್ತಿಕಾಸನ, ವೀರಾಸನ, ಗೋಮುಖಾಸನ ಸುಖಾಸನಗಳೆ ಜಪ ಕರ್ಮಕ್ಕೆ ಯೋಗ್ಯವಹುದಾಸನಂಗಳು ಎಂದು ಸುಸ್ಥಿರನಾಗಿ ಕುಳ್ಳಿರುವುದಯ್ಯ ಶಾಂತವೀರೇಶ್ವರಾ