ಪರಾತ್ಪರವಾದ ಲಿಂಗದಲ್ಲಿಯೂ
ಆ ಲಿಂಗದ ಸ್ವರೂಪವಾದ ಗುರುವಿನಲ್ಲಿಯೂ
ಆವಾತಂಗೆ ಭಕ್ತಿಯ ಸಮಾನವಾಗಿಪ್ಪುದೋ
ಆತನುಭಯಸ್ಥಲವುಳ್ಳಾನತಹನಯ್ಯ
ಶಿವಜ್ಞಾನ ಮಹಾ ನಿಧಿಯಾಗಿರ್ದು
ರಾಗ ದ್ವೇಷ ರಹಿತನಾದ ಗುರುವಿಗೆ
ಶರೀರದಿಂದ ದ್ರವ್ಯದಿಂದ ಆವಾಗಲು ಭಕ್ತಿ ಮಾಡುವದಯ್ಯ!
ಶಾಂತವೀರೇಶ್ವರಾ
ಸೂತ್ರ : ಈ ಪ್ರಕಾರದಿಂದ ಉಭುಯಸ್ಥಲದಲ್ಲಿ ಲಿಂಗಾಂಗಗಳುಭಯ ಸ್ಥಲದ ಸಂಬಂಧದ ಜ್ಞಾನವು ಭಕ್ತಂಗೆ ಶರೀರ ಮನೋಭಾವಂಗಳಲ್ಲಿ ಗುರುಲಿಂಗ ಸ್ವರೂಪವಾದ ‘ತ್ರಿವಿಧಸಂಪತ್ತಿಸ್ಥಲ’ವಾಯಿತ್ತು.
Art
Manuscript
Music
Courtesy:
Transliteration
Parātparavāda liṅgadalliyū
ā liṅgada svarūpavāda guruvinalliyū
āvātaṅge bhaktiya samānavāgippudō
ātanubhayasthalavuḷḷānatahanayya
śivajñāna mahā nidhiyāgirdu
rāga dvēṣa rahitanāda guruvige
śarīradinda dravyadinda āvāgalu bhakti māḍuvadayya!
Śāntavīrēśvarā
sūtra: Ī prakāradinda ubhuyasthaladalli liṅgāṅgagaḷubhaya sthalada sambandhada jñānavu bhaktaṅge śarīra manōbhāvaṅgaḷalli guruliṅga svarūpavāda ‘trividhasampattisthala’vāyittu.