Index   ವಚನ - 306    Search  
 
ನದಿಗಳು ಉದಕವನು ತಾವೆ ಕುಡಿಯವು ವೃಕ್ಷಂಗಳು ಮಾಧುರ್ಯ ಫಲಂಗಳನು ತಾವೆ ಭಕ್ಷಿಸವು. ದೇವೆಂದ್ರನು ಒಂದಾನೊಂದು ಠಾವಿನಲ್ಲಿ ಬೆಳೆದ ಬೆಳೆಗಳನು ತಾನೆ ಭುಂಜಿಸನು ಅದು ಕಾರಣವಾಗಿ ಸಜ್ಜನ ಸದ್ಭಕ್ತರ ಐಶ್ವರ್ಯವು ಪರೋಪಕಾರಕ್ಕೋಸ್ಕರವಯ್ಯ ಶಾಂತವೀರೇಶ್ವರಾ