Index   ವಚನ - 313    Search  
 
ಪಾತ್ರಾಪಾತ್ರಂಗಳ ವಿಶೇಷವೇನೆಂದರೆ, ಗೋವು ಸರ್ಪಂಗಳ ಹಾಗೆ, ಗೋವು ಎಂಥದೆಂದರೆ ಹುಲ್ಲಿನಿಂದ ಕ್ಷೀರವ ನೀಡುವುದು, ಸರ್ಪವೆಂಥದೆಂದರೆ ಹಾಲು ಕುಡಿದಿ ವಿಷವ ಕಕ್ಕುವುದು. ಪಾತ್ರ ಅಪಾತ್ರ ಈ ಪ್ರಕಾರವೆಂದು ತಿಳಿವುದಯ್ಯ ಶಾಂತವೀರೇಶ್ವರಾ