Index   ವಚನ - 315    Search  
 
‘ಎಲೆ ಪಾರ್ವತಿಯೆ, ತಪಸ್ಸು ಯಜ್ಞ ಮೊದಲಾದಂತಹ ಕ್ರಿಯೆಗಳ ಪುಣ್ಯಂಗಳ ಸ್ವರ್ಗಾದಿ ಭೋಗಂಗಳು ಅನುಭವಿಸಿ ತೀರಿದ ಮೇಲೆ ನಾಶವಾಗುವವು. ಶಿವಭಕ್ತನ ಮುಖವೆಂಬ ಹೋಮ ಕುಂಡದಲ್ಲಿ ಮಾಡಿದಂಥ ಅನ್ನೋದಕ ಮೊದಲಾದ ಹವಿಸ್ಸು ಎಂದೆಂದು ಕೆಡದು’ ಎಂದು ಈಶ್ವರನು ನಿರೂಪಿಸಿರುವನಯ್ಯ ಶಾಂತವೀರೇಶ್ವರಾ