Index   ವಚನ - 316    Search  
 
ಶಿವಭಕ್ತನು ಗೃಹದಲ್ಲಿ ಭಸ್ಮಾಂಗಿಯಾದ ಶಿವಯೋಗಿಯು ಮೂರ್ಖನಾದರೂ ಬಲ್ಲವನಾದರೂ ಶಿವಲಿಂಗಾರ್ಪಣ ಮಾಡುವನು. ಅಲ್ಲಿ ಮಹಾದೇವನು ಅಂಬಿಕಾ ಸಮೇತನಾಗಿ ವೃಷಭ ಧ್ವಜವುಳ್ಳವನಾಗಿ ಭುಂಜಿಸುತ್ತಿಹನಯ್ಯ ಶಾಂತವೀರೇಶ್ವರಾ