Index   ವಚನ - 330    Search  
 
ಆಚಾರಲಿಂಗದಲ್ಲಿ ಪೃಥ್ವಿ ಸಮರ್ಪಿತವಾಯಿತ್ತಯ್ಯ ಗುರುಲಿಂಗದಲ್ಲಿ ಅಪ್ಪು ಸಮರ್ಪಣವಾಯಿತ್ತಯ್ಯ ಶಿವಲಿಂಗದಲ್ಲಿ ಅಗ್ನಿ ಸಮರ್ಪಿತವಾಯಿತ್ತಯ್ಯ. ಜಂಗಮಲಿಂಗದಲ್ಲಿ ವಾಯು ಸಮರ್ಪಿತವಾಯಿತ್ತಯ್ಯ ಪ್ರಸಾದಲಿಂಗದಲ್ಲಿ ಆಕಾಶ ಸಮರ್ಪಿತವಾಯಿತ್ತಯ್ಯ ಮಹಾಲಿಂಗದಲ್ಲಿ ಆತ್ಮ ಸರ್ವಾರ್ಪಿತವಾಯಿತ್ತಯ್ಯ. ತನು ಮನ ಧನವೆಂಬ ತ್ರಿವಿಧವು ಗುರು ಲಿಂಗ ಜಂಗಮಕ್ಕೆ ಸಮರ್ಪಿತವಾಗಿ ತನುತ್ರಯಂಗಳು ಲಿಂಗತ್ರಯ ಸ್ವರೂಪವಾದ ಶ್ರೀ ಗುರುಲಿಂಗದಲ್ಲಿ ಐಕ್ಯವಾಯಿತ್ತ ಕಂಡು ನಾನು ಷಟ್ಸ್ಥಲಬ್ರಹ್ಮಸ್ವರೂಪವಾದ ಲಿಂಗದಲ್ಲಿ ಐಕ್ಯವಾದೆನಯ್ಯ ಶಾಂತವೀರೇಶ್ವರಾ ಇದು ಸಕಲ ಪುರಾತನೋಕ್ತಿ ವೇದಾಗಮ ಪುರಾಣೋಪನಿಷದ್ವಾಚ್ಯ ಪ್ರತಿಪಾದಿತಾರ್ಥ ಪ್ರತಿಷ್ಠಾಚಾರ್ಯವರ್ಯ ದ್ವಿತೀಯ ಮುರಿಗಾಖ್ಯ ಶಿವಯೋಗೀಂದ್ರ ಜ್ಞಾನ ಪ್ರಸನ್ನಾರ್ಹ ಷಟ್ಸ್ಥಲಾಚಾರ್ಯ ಸಿದ್ಧಲಿಂಗಾಖ್ಯ ಶಿವಯೋಗಿಶ್ವರ ಷಟ್ಸ್ಥಲ ಜ್ಞಾನ ಪ್ರಸಾದ ಸಂತೃಪ್ತ ಷಟ್ಸ್ಥಲಾದ್ವೈತ ವಿದ್ಯಾ ಪ್ರಮೋದಿತ ಬಾಲೇಂದುಪುರ ಶಾಂತವೀರೇಶ್ವರ ಕರಸರಸಿಜ ಸಂಭವ ಪರ್ವತ ಶಿವಯೋಗಿ ನಿರೂಪಿತ ಮುಕ್ತ ಚರಿತಮಪ್ಪ ಏಕೋತ್ತರ ಶತಸ್ಥಲದೋಳ್ ಭಕ್ತ ಸ್ಥಲ ಸಂಪೂರ್ಣಂ ಮಂಗಳಮಸ್ತು. ಸೂತ್ರ: ಈ ಪ್ರಕಾರದಿಂದ ಭಕ್ತಸ್ಥಲವನಾಶ್ರಯಿಸಿ ಕರ್ತೃ ಭೃತ್ಯ ಭಾವವನು ಮರೆದು ತನ್ನ ಸ್ವರೂಪಿನಲ್ಲಿ ನಿಂದ ಮಹಾತ್ಮನು ಅನಂತರದಲ್ಲಿ ನಿಷ್ಠಾ ಮುಖದಿಂದ ಆಚಾರವನು ಅನುಸರಿಸಿ ಸಮರಸ ಭಾವನೆಯ್ದಿದ ಭೇದವೆಂತಿದ್ದಿತೆಂದರೆ ಮುಂದೆ ‘ಮಾಹೇಶ್ವರಸ್ಥಲ’ವಾದುದು.