ಮುಖಾಂಭುಜಕ್ಕೀವ ದಧಿ ಮಧು ಮಿಶ್ರಮಾದ
‘ಮಧುಪರ್ಕ ದ್ರವ್ಯಂ’ಗಳಂ
ಫಲ ಖರ್ಜೂರ ಕರ್ಪೂರ ಕೋಷ್ಟ ಕುಂಕಮ ಯಾಲಕ್ಕಿ
ಎಂಬಾರು ‘ಅಚಮನ ದ್ರವ್ಯಂ’ಗಳಂ
ಪಂಚಗವ್ಯವನು ಪಂಚಾಮೃತಂಗಳ
ಗೋಚೂರ್ಣ ಗಂಧಾದ್ಯದ್ವರ್ತನ
ದ್ರವ್ಯಂಗಳಂ ಮಂದೋಷ್ಣಾದಿ ‘ಸ್ನಾನವಾರಿ’ಗಳಂ
ಗಂಧೋದಕ ಪುಷ್ಪೋದಕ, ರತ್ನೋದಕ ಮಂತ್ರೋದಕಂಗಳ
ಮಹಾ ‘ಸ್ನಾನೋದಕಂ’ಗಳಂ
ವಿಧಿನಯ ಶುಭ್ರಾದಿ ಗುಣಯುಕ್ತ ‘ಭಸಿತಂ’ಗಳಂ
ಪಟ್ಟೆ ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಾ
ಸುವರ್ಣ ರಜತಪಟ್ಟೆ ಸೂತ್ರಾದಿ
ಯಜ್ಞೋಪವೀತಂಗಳಂ ‘ಕೀರಟಾದ್ಯಾಭರಣಂಗಳಂ’,
ಚಂದನ ಅರಗು ಕಸ್ತೂರಿ, ಕರ್ಫೂರ
ತಮಾಲದಳ ಕುಂಕುಮ ಲಾಮಂಚ
ಕೋಷ್ಟಂಗಳೆಂಬ ಅಷ್ಟಗಂಧಂಗಳಂ,
ಜವೆ ಬಿಳಿ ಸಾಸುವೆ ತಿಲ ತಂಡಲ ‘ಮುಕ್ತಾಫಲವಾದ್ಯಕ್ಷತೆಗಳಂ’,
ಶುಭ, ರಕ್ತ ಕೃಷ್ಣ ವರ್ಣ ಕ್ರಮದಿಂ ನಂದ್ಯಾವರ್ತಾದಿ ಕಮಲಾದಿ
ನೀಲೋತ್ಪಲಾದಿ ಬಿಲ್ವಾದಿ ‘ಪತ್ರ ಜಾಲಂ’ಗಳಂ
ಕರಿಯಗರು ಬಿಳಿಯಗರು ಗುಗ್ಗುಳ ಶ್ರೀಗಂಧ
ಅಗರು ಬಿಲ್ವ ಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಫೂರವೆಂಬ
ದಶಾಂಗ ಧೂಪಂಗಳಿಂ
ತೈಲ ವತ್ತಿ ಘೃತ ಕರ್ಪೂರವೆಂಬ ‘ದೀಪ ಸಾಧನಂ’ಗಳಂ
ಹರಿದ್ರಾನ್ನ, ಪರಮಾನ್ನ ಮುದ್ಗಾನ್ನ ಕೃಸರಾನ್ನ ದಧ್ಯಾನ್ಯ ಗೂಡಾನ್ನವೆಂಬ
ಷಡ್ವಿಧಾನ್ನಾದಿ ‘ನೈವೇದ್ಯಂ’ಗಳಂ
ಪೂಗ ಪರ್ಣ ಚೂರ್ಣ ಕರ್ಫೂರಾದಿ ‘ತಾಂಬೂಲ ದ್ರವ್ಯಂ’ಗಳಂ
ಬೇರೆ ಬೇರೆ ಸಂಪಾದಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mukhāmbhujakkīva dadhi madhu miśramāda
‘madhuparka dravyaṁ’gaḷaṁ
phala kharjūra karpūra kōṣṭa kuṅkama yālakki
embāru ‘acamana dravyaṁ’gaḷaṁ
pan̄cagavyavanu pan̄cāmr̥taṅgaḷa
gōcūrṇa gandhādyadvartana
dravyaṅgaḷaṁ mandōṣṇādi ‘snānavāri’gaḷaṁ
gandhōdaka puṣpōdaka, ratnōdaka mantrōdakaṅgaḷa
mahā ‘snānōdakaṁ’gaḷaṁ
vidhinaya śubhrādi guṇayukta ‘bhasitaṁ’gaḷaṁ
paṭṭe dēvāṅga śubhra citrādi vastraṅgaḷā
Suvarṇa rajatapaṭṭe sūtrādi
yajñōpavītaṅgaḷaṁ ‘kīraṭādyābharaṇaṅgaḷaṁ’,
candana aragu kastūri, karphūra
tamāladaḷa kuṅkuma lāman̄ca
kōṣṭaṅgaḷemba aṣṭagandhaṅgaḷaṁ,
jave biḷi sāsuve tila taṇḍala ‘muktāphalavādyakṣategaḷaṁ’,
śubha, rakta kr̥ṣṇa varṇa kramadiṁ nandyāvartādi kamalādi
nīlōtpalādi bilvādi ‘patra jālaṁ’gaḷaṁ
kariyagaru biḷiyagaru gugguḷa śrīgandha
agaru bilva phala tuppa jēnutuppa sajjarasa karphūravemba
daśāṅga dhūpaṅgaḷiṁ
The golden silver bar is the formula
Yoga yoga
Chandana Araku Musk, curfura
Tamangala saffron Lamancha
Ashtagandhalam, which is a table,
Java white sauce
Good luck, blood krishna color order
Nilotpalai Bilwadi ಪತ್ರ Letter Network
Blacks and whites guggula sandalwood
Agar bilva fruit ghee is a honey gel curfew
Dashanga incense
Taila vatti ghr̥ta karpūravemba ‘dīpa sādhanaṁ’gaḷaṁ
haridrānna, paramānna mudgānna kr̥sarānna dadhyān'ya gūḍānnavemba
ṣaḍvidhānnādi ‘naivēdyaṁ’gaḷaṁ
pūga parṇa cūrṇa karphūrādi ‘tāmbūla dravyaṁ’gaḷaṁ
bēre bēre sampādisuvudayya
śāntavīrēśvarā