ಇನ್ನು ನಾರಾಯಣನು
ಭೃಗುಮುನಿಯ ಶಾಪದಿಂದ ಆದ ದಶವಾತಾರಗಳೆಂತೆನೆ,
‘ಎಲೈ ನಾರಾಯಣನೆ ನೀನು ಮತ್ಸ್ಯ ಕೂರ್ಮ ರೂಪವುಳ್ಳವನಾಗಿ ಮಾಂಸ
ನೆತ್ತರ ಕೀವನು ಭುಂಜಿಸುವಾತನಾಗಿ
ವರಾಹ ರೂಪಿನಿಂದೆ ಲೋಕದ ಮನುಜರ ಮಲವನು ತಿನ್ನುವ
ಹಾಂಗೆ ತಾಮಸಂಗಳಾದ ನಾನಾ ದೋಷಂಗಳ ಬಹುವಾದ
ದುಃಖಗಳುಳ್ಳಾತನಾಗೆಂದು’ ಶಪಿಸಿದನಯ್ಯ
ಶಾಂತವೀರೇಶ್ವರಾ