ಪ್ರಳಯ ಕಾಲದಲ್ಲಿ ಸಂಹಾರವಾದ ತ್ರಿವಿಕ್ರಮನನೆ
ಬೆನ್ನು ನಿಟ್ಟೆಲುವಿನಿಂದ ಕಟ್ಟಿಗೊಂಡು ಒಪ್ಪುತಿರ್ಪ
ಮಹಾಶೇಷನೆ ನೇಣು.
ನರಸಿಂಹನ ಉಗುರುಗಳಿಂದ ಸೀಳಿದ
ಆದಿವರಾಹನ ಮಾಂಸವನು ಎರೆಯ ಮಾಡಿ
ಆವನು ವಿಶ್ವವು ಒಂದೇ ಸಮುದ್ರದಲ್ಲಿ
ಚೆನ್ನಾಗಿ ಸಂತೋಷಿಸಿತ್ತಿರುವ ಎರಡಾದಂಥ ಮತ್ಸ್ಯ ಕೂರ್ಮಂಗಳನು
ಸೆಳೆಯುತ್ತಿದ್ದಾತನಾಗಿ ಬಲೆಗಾರತನವನು ಐಯ್ದಿದಂಥ ಪರಮೇಶ್ವರನು
ಸತ್ಪುರಷರುಗಳ ಅಜ್ಞಾನವನು ನಾಶ ಮಾಡುವನಯ್ಯ
ಶಾಂತವೀರೇಶ್ವರಾ