Index   ವಚನ - 365    Search  
 
ಜ್ಯೋರ್ತಿಲಿಂಗವಾಗಿ ತಮ್ಮ ಕರ್ತೃವಾದ ಶಿವನನು ಅರಿಯದೆ ‘ನಾನೇ ಕರ್ತ’ನೆಂದು ನುಡಿವುತಿರ್ದ ಬ್ರಹ್ಮವಿಷ್ಣುಗಳು ಹಾಂಗೆ ನುಡಿದ ದೋಷದಿಂದ ಹಂಸ ವರಾಹು ಜನ್ಮ ಪಡೆದರೆಂದು ಕರ್ಮಪಾಕವನು ಧರ್ಮಶಾಸ್ತ್ರಗಳು ಹೇಳುವವು. ಅತ್ಯುತ್ಕರ್ಷಂಗಳಾದ ಪುಣ್ಯ ಪಾಪಂಗಳಿಂದ ಈಗ ಆ ಫಲವನು ಅನುಭವಿಸುತ್ತಿಹರು. ಗರ್ವ ಗುಣದೋಷ ವಶದಿಂದ ಆ ಬ್ರಹ್ಮ ವಿಷ್ಣುಗಳಿಬ್ಬರು ವರಾಹ ಹಂಸ ರೂಪಂಗಳುಳ್ಳವರಾದರೆಂದು ಹೇಳುವರಯ್ಯ ಶಾಂತವೀರೇಶ್ವರಾ