Index   ವಚನ - 366    Search  
 
‘ದೇವತೆಗಳ’ ಸಹಸ್ರ ವರ್ಷದ ಕಡೆಯಲ್ಲಿ ಆ ಬ್ರಹ್ಮನ ಗರ್ಭದಿಂದ ಗುದದಿಂದ ಹೊರಟವನಾಗಿ ನಾನು ಅಧೋಕ್ಷಜನಾದೆನೆಂದು ಹೇಳಿದನಯ್ಯ ಎಲೆ ದುರ್ಬುದ್ಧಿಯುಳ್ಳ ಗರ್ವಿಷ್ಟನಾದ ವ್ಯಾಸನೆ ನೀನು ದೊಡ್ಡದಾದ ಕೇಡನು ನುಡಿದೆ ಎನ್ನ ಒಡೆಯನಾದ ಶಿವನನು ಜರೆದು ಆವುದಾನೊಂದು ಕಾರಣದಿಂದ ಎನ್ನನು ಕೊಂಡಾಡುತ್ತಿದ್ದಿ ಎಂದು ವಿಷ್ಣುವು ನುಡಿದನಯ್ಯ ಶಾಂತವೀರೇಶ್ವರಾ