ಬಳಿಕಾ ಶಿವಲಿಂಗವೆ ಶಿವನೆಂಬ ಭಾವದಿಂದ
ಆಹ್ವಾನ ನಿರಸನಮಂ ಮಾಡಿದ ಮಾಹೇಶ್ವರನು
ಪೃಥ್ವಿ ಅಪ್ಪು ತೇಜ ವಾಯು ಆಕಾಶ,
ಚಂದ್ರ ಸೂರ್ಯ ಆತ್ಮರೂಪವಾದ
ಅಷ್ಟಮೂರ್ತಿಗಳು ಶಿವನು ಭಿನ್ನವೆಂದು
ದೃಷ್ಟಾಂತಪೂರ್ವಕವಾಗಿ ಅಷ್ಟಮೂರ್ತಿನಿರಸನಮಂ
ಮಾಡುತಿರ್ದನದಂತೆನೆ,
ಶಿವಪೂಜಾದಿ ಕರ್ಮಸಂಗವುಳ್ಳ ಮಾಹೇಶ್ವರನಿಗೆ
ಶಿವಾತ್ಮರ ಅದ್ವೈತವು ಹೀಂಗೆ ಸಮ್ಮತವಲ್ಲ.
ಹಾಂಗೆಯೇ ಶಿವನಿಗೆಯು ಪೃಥ್ವಿ
ಮೊದಲಾದ ಅಷ್ಟತನುವಿಗೆಯು ಐಕ್ಯರೂಪವಾದ ದ್ವೈತವು ಇಲ್ಲ.
ಹಾಂಗೆ ತನುತ್ರಯದಿಂದ ಆತ್ಮನು ಭಿನ್ನನು.
ಹಂಗೆಯೇ ಅಷ್ಟತನುಗಳಿಂದ
ಶಿವನು ಭಿನ್ನನೆಂಬುದರ್ಥವಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Baḷikā śivaliṅgave śivanemba bhāvadinda
āhvāna nirasanamaṁ māḍida māhēśvaranu
pr̥thvi appu tēja vāyu ākāśa,
candra sūrya ātmarūpavāda
aṣṭamūrtigaḷu śivanu bhinnavendu
dr̥ṣṭāntapūrvakavāgi aṣṭamūrtinirasanamaṁ
māḍutirdanadantene,
śivapūjādi karmasaṅgavuḷḷa māhēśvaranige
śivātmara advaitavu hīṅge sam'matavalla.
Hāṅgeyē śivanigeyu pr̥thvi
modalāda aṣṭatanuvigeyu aikyarūpavāda dvaitavu illa.
Hāṅge tanutrayadinda ātmanu bhinnanu.
Haṅgeyē aṣṭatanugaḷinda
śivanu bhinnanembudarthavayya śāntavīrēśvarā