Index   ವಚನ - 382    Search  
 
ಪರಮೇಶ್ವರನಿಗೆ ಪೃಥ್ವಿ ಮೊದಲಾದಷ್ಟಮೂರ್ತಿಯುಳ್ಳ ತನುವು. ಆ ಪೃಥುವ್ಯಾದ್ಯಷ್ಟಮೂರ್ತಿಗಳಿಗೆ ಅಧಿಷ್ಠಾಪ್ಯವಹತನದಿಂದ ಪ್ರತ್ಯಕ್ಷವಾದ ಐಕ್ಯವು ಪೃಥ್ವಿ ಮೊದಲಾದ ಈ ಸಮಸ್ತವು ಕಾರಣತ್ರಯದಿಂದ ಹುಟ್ಟಿದ ಕಾರ್ಯವು ನಿಮಿತ್ತ ಕಾರಣನಾದ ಪರಮೇಶ್ವರನು, ನಿಮಿತ್ತ ಕಾರಣವಾದ ಕುಂಬಾರನು ಹೇಂಗೆ ಉಪಾದನ ಕಾರಣವಾದ ಮಣ್ಣ ಮುದ್ದೆಯಲಿಲ್ಲ ಹಾಂಗೆ ಪ್ರತ್ಯಕ್ಷವಾದ ಈ ಪರಮೇಶ್ವರನು ಈ ಕಾರ್ಯ ರೂಪವಾದ ಜಗತ್ತಲ್ಲವಯ್ಯ ಶಾಂತವೀರೇಶ್ವರಾ