Index   ವಚನ - 381    Search  
 
ಬಳಿಕಾ ಶಿವಲಿಂಗವೆ ಶಿವನೆಂಬ ಭಾವದಿಂದ ಆಹ್ವಾನ ನಿರಸನಮಂ ಮಾಡಿದ ಮಾಹೇಶ್ವರನು ಪೃಥ್ವಿ ಅಪ್ಪು ತೇಜ ವಾಯು ಆಕಾಶ, ಚಂದ್ರ ಸೂರ್ಯ ಆತ್ಮರೂಪವಾದ ಅಷ್ಟಮೂರ್ತಿಗಳು ಶಿವನು ಭಿನ್ನವೆಂದು ದೃಷ್ಟಾಂತಪೂರ್ವಕವಾಗಿ ಅಷ್ಟಮೂರ್ತಿನಿರಸನಮಂ ಮಾಡುತಿರ್ದನದಂತೆನೆ, ಶಿವಪೂಜಾದಿ ಕರ್ಮಸಂಗವುಳ್ಳ ಮಾಹೇಶ್ವರನಿಗೆ ಶಿವಾತ್ಮರ ಅದ್ವೈತವು ಹೀಂಗೆ ಸಮ್ಮತವಲ್ಲ. ಹಾಂಗೆಯೇ ಶಿವನಿಗೆಯು ಪೃಥ್ವಿ ಮೊದಲಾದ ಅಷ್ಟತನುವಿಗೆಯು ಐಕ್ಯರೂಪವಾದ ದ್ವೈತವು ಇಲ್ಲ. ಹಾಂಗೆ ತನುತ್ರಯದಿಂದ ಆತ್ಮನು ಭಿನ್ನನು. ಹಂಗೆಯೇ ಅಷ್ಟತನುಗಳಿಂದ ಶಿವನು ಭಿನ್ನನೆಂಬುದರ್ಥವಯ್ಯ ಶಾಂತವೀರೇಶ್ವರಾ