ಸರ್ವಗತ ಶಿವನಾದೊಡೆ ಸರ್ವಕ್ಕೆ
ಜನನ ಮರಣ ಪೂಣ್ಯ ಪಾಪ ಸುಖ ದುಃಖಗಳುಂಟೆ?
ಸಕಲ ಪ್ರಾಣಿಗಳಲ್ಲಿಯೂ ಶಿವನಿರ್ದೊಡೆ
ಹುಲಿ ಹುಲ್ಲೆಯನ್ನು ಮಾರ್ಜಾಲ ಮೂಷಕವನ್ನು
ಗರುಡ ಸರ್ಪವನ್ನು ನಾಯಿ ಮೊಲವನ್ನು ಕೊಲಲಾಗದಯ್ಯ.
ಕೊಂದೊಡೆ ಶಿವದ್ರೋಹಮಪ್ಪುದು.
ಅದು ಕಾರಣ ಸರ್ವಗತ ಶಿವನಲ್ಲವಯ್ಯ.
ಬಿತ್ತಿದ ಬೆಳೆಯಲ್ಲಿ ಆ ಬೀಜ ಸ್ಥಾಪಕನವರ
ಹಾಗೆ ವೃದ್ಧಿಗೊಳಗಾಗಿದ್ದಾನೆ. ಆಶ್ವ ಗಜಾವಳಿ
ಮೃಗಾವಳಿ, ತರು ಲತಾವಳಿ
ಸ್ವರ್ಗ ಮರ್ತ್ಯ ಪಾತಾಳಾವಳಿಗಳು
ಮೊದಲಾದ ಲೇಖವನ ಮಾಡಿದ
ಭಾವಚಿತ್ರಿಕನು ವರ ಕೊರತೆ ನೆರತೆಗಳಿಗೊಳಗಲ್ಲವಯ್ಯ.
ಕಬ್ಬನವ ಕಮ್ಮಾರ ಮಾಡುವನೆಂದರೆ
ಆ ಕಬ್ಬುನ ತಾ ಕಮ್ಮಾರನಪ್ಪನೆ? ಕುಂಭವ
ಕುಂಭಕಾರ ಮಾಡುವನೆಂದರೆ ಕುಂಭವೇನು ಕುಂಭಕಾರನೆ?
ಅಲ್ಲವಯ್ಯ, ಆ ಹಾಂಗೆ ಸಚರಾಚರವನು ಸೃಜಿಸಿದ
ಶಿವನಾ ಜಗತ್ತಿನ ಸುಖ ದುಃಖಕ್ಕೆ ಒಳಗಲ್ಲವಯ್ಯ
ಶಾಂತವೀರೇಶ್
Art
Manuscript
Music
Courtesy:
Transliteration
Sarvagata śivanādoḍe sarvakke
janana maraṇa pūṇya pāpa sukha duḥkhagaḷuṇṭe?
Sakala prāṇigaḷalliyū śivanirdoḍe
huli hulleyannu mārjāla mūṣakavannu
garuḍa sarpavannu nāyi molavannu kolalāgadayya.
Kondoḍe śivadrōhamappudu.
Adu kāraṇa sarvagata śivanallavayya.
Bittida beḷeyalli ā bīja sthāpakanavara
hāge vr̥d'dhigoḷagāgiddāne. Āśva gajāvaḷi
mr̥gāvaḷi, taru latāvaḷi
svarga martya pātāḷāvaḷigaḷu
Modalāda lēkhavana māḍida
bhāvacitrikanu vara korate nerategaḷigoḷagallavayya.
Kabbanava kam'māra māḍuvanendare
ā kabbuna tā kam'māranappane? Kumbhava
kumbhakāra māḍuvanendare kumbhavēnu kumbhakārane?
Allavayya, ā hāṅge sacarācaravanu sr̥jisida
śivanā jagattina sukha duḥkhakke oḷagallavayya
śāntavīrēśvarā