Index   ವಚನ - 416    Search  
 
ಮಾಡಿದ ಪದಾರ್ಥವ ಎಲ್ಲವನು ಗಂಗಳ ತುಂಬ ನೀಡಿಸಿಕೊಂಡಾ ಲಿಂಗಕ್ಕರ್ಪಿಸಿದ ಬಳಿಕ ಲಿಂಗಕ್ಕೆ ಕೊಟ್ಟೆವೆಂದು. ಲಿಂಗವ ಸಜ್ಜೆ ವಸ್ತ್ರಂಗಳಲ್ಲಿ ಕಟ್ಟಿಕೊಂಡು ಹೊಟ್ಟೆಯ ತುಂಬಿಕೊಂಡವರಿಗೆ ಪ್ರಸಾದವಿಲ್ಲವಯ್ಯ. ತಟ್ಟುವ ಮುಟ್ಟುವ ಭೇದವನರಿದು ಕಾಯದ ಕರದಲ್ಲಿ ಇಷ್ಟಲಿಂಗದ ಮುಖವೈದನರಿದು ಸಕಲ ಪದಾರ್ಥವನು ಅರ್ಪಿಸಿ ಆ ಲಿಂಗ ಪ್ರಸಾದವ ಕೊಳಬಲ್ಲರೆ ಆತನೆ ಪ್ರಸಾದಿಯಯ್ಯ ಶಾಂತವೀರೇಶ್ವರಾ