Index   ವಚನ - 433    Search  
 
ಭವ ದುಃಖವನು ಓಡಿಸುವಂಥ ಎಲೆ ಪರಮೇಶ್ವರನೆ, ಜನ್ಮಂಗಳ ದುಃಖದಿಂದೆ ಭಯ ಪಡುವ ಎನ್ನನು ನಿನ್ನ ಬಲಗಡೆಯ ಮುಖದಿಂದ ರಕ್ಷಿಸಿ ಮುಕ್ತನನ್ನಾಗಿ ಮಾಡು. ಈ ಶ್ರುತಿ ತಾತ್ಪರ್ಯವೆಂದರೆ, ಬ್ರಹ್ಮ ವಿಷ್ಣು ಮೊದಲಾದ ದೇವತೆಗಳು ಜನ್ಮಂಗಳ ದುಃಖಂಗಳನು ಪರಿಹರಿಸಲು ಸಮರ್ಥರಲ್ಲ. ಅದಕ್ಕೆ ಶಿವನೊಬ್ಬನೆ ಸಮರ್ಥನಾದ ಕಾರಣ, ಎಲೆ ಪರಮೇಶ್ವರನೆ, ನನ್ನ ಭವದುಃಖಗಳನು ಸಂಹರಿಸುವುದಕ್ಕೆ ಅಭಿಮುಖನಾಗೆಂದು ವೇದಪುರುಷನು ಲಿಂಗಮೂರ್ತಿಯಾದ ಶಿವನನು ಬೇಡಿಕೊಳ್ಳುತ್ತಿಹನೆಂಬುದು ತಾತ್ಪರ್ಯವಯ್ಯ ಶಾಂತವೀರೇಶ್ವರಾ