Index   ವಚನ - 432    Search  
 
ಮೂರಾದ ವಸ್ತುಗಳಿಗೆ ತಂದೆಯಾದಾತನಾಗಿ ಸರ್ವ ಪದಾರ್ಥಂಗಳಲ್ಲಿಯೂ ಪುಷ್ಪಂಗಳಲ್ಲಿಯ ಪರಿಮಳದ ಹಾಂಗೆ ಇರ್ದಾತನಾಗಿ ಪ್ರಕೃತಿ ಪುರುಷಾದಿಗಳಲ್ಲಿ ಪುಷ್ಠಿಯ ವರ್ಧಿಸುವಾತನಾದ ಆ ಮೃತ್ಯಂಜಯನನು ಪೂಜಿಸುತಿರ್ದೆವು. ಈ ಸತ್ಯದ ದೆಸೆಯಿಂದ ತೊಟ್ಟಿನ ಸೌತೆಯ ಹಣ್ಣಿನ ಹಾಂಗೆ ಮೃತ್ಯವಿನಿಂದ ಎನ್ನ ಬಿಡಿಸಿಕೊಂಡನಯ್ಯ ಶಾಂತವೀರೇಶ್ವರಾ