Index   ವಚನ - 434    Search  
 
ಅದು ಕಾರಣ, ಎಲೆ ಪರಮೇಶ್ವರನೆ ನೀನು ವಿಶ್ವಕ್ಕೆ ಕರ್ತನು, ನಿನಗೆ ಹುಟ್ಟಿಸುವಾತನೆ ಇಲ್ಲ. ನೀನು ವಿಶ್ವಪಾಲಕನು. ನಿನಗೆ ಪೋಷಿಸುವಾತನು ಇಲ್ಲ, ನೀನು ವಿಶ್ವಮಂ ಸಂಹರಿಸುವಾತನು. ನಿನಗೆ ಸಂಹಾರಕನು ಇಲ್ಲ, ನೀನು ವಿಶ್ವಕ್ಕೆ ಒಡೆಯನು. ನಿನಗೆ ಒಡೆಯನಿಲ್ಲವಯ್ಯ ಶಾಂತವೀರೇಶ್ವರಾ