Index   ವಚನ - 438    Search  
 
ಈ ಪ್ರಕಾರಿಂದ, ಸಕಲ ದೇವತಾತ್ಮಕವಾದಂಥ ಜಂಗಮಲಿಂಗವು ಭಕ್ತ[ನ] ಅನುಗ್ರಹಕ್ಕೆ ಪಂಚೇಂದ್ರಿಯಗಳಲ್ಲಿ ಪಂಚ ಮುಖಗಳಲ್ಲಿ, ಹತ್ತು ಭುಜಗಳಲ್ಲಿ, ಎರಡು ಪಾದಗಳಲ್ಲಿ ಪೂಜೆಕೊಂಡು ತೇಜೋಮಯವಾದ ದಿವ್ಯ ದೇಹಂಗಳನು ಹೀಂಗೆ ಧರಿಸಿಕೊಂಡಿಹನೆಂದು ಅತ್ಯಂತ ಪೂಜ್ಯವಾದ ‘ಅಥರ್ವಣ ಶಿಖೆ’ಯು ಪ್ರತಿಪಾದಿಸುತ್ತಿರ್ದಿತಯ್ಯ ಶಾಂತವೀರೇಶ್ವರಾ