ವಿದ್ವಾಂಸರಾಗಿ ಇಂದ್ರಿಯಗಳ ಗೆಲ್ದ
ಮನಸ್ಸುಳ್ಳವರಾದ ಬ್ರಾಹ್ಮಣರು
ದುಃಖವಿದ್ರಾವಕನಾದ ಪರಮೇಶ್ವರನಿಗೆ
ಅರ್ಪಿತವಾದ ವಸ್ತುವನು ಭುಂಜಿಸುತ್ತಿಹರು,
ಪರಮೇಶ್ವರ ಸ್ವೀಕರಿಸಿದ ಪಾನವ ಪಾನ
ಮಾಡುವರು, ಆ ಪರಮೇಶ್ವರ
ಘ್ರಾಣಿಸಿದ ಪುಷ್ಪವನು ಘ್ರಾಣಿಸುವರು.
ಶಿವಪ್ರಸಾದವನೆ ಭುಂಜಿಸುವರು, ಅದು ಕಾರಣ,
‘ನಿರ್ಮಾಲ್ಯವನೆ’ ಸೇವಿಸುವುದು,
ಶಿವ ಪ್ರಸಾದವನೆ ಭುಂಜಿಸುವುದು ಎಂದು
ಜಾಬಾಲ ಶ್ರುತಿ ಹೇಳುತ್ತಿಹುದು
ಶಾಂತವೀರೇಶ್ವರಾ