ಗುರೂಪದೇಶದಿಂದ ಪ್ರಾಣಾಪಾನ ಸಂಘಟ್ಟನವಾಗಿ
ಅವುದಾನೊಂದು ಜ್ಯೋತಿಯು
ನಾಭಿಕಮಲದ ಮಧ್ಯದಿಂದ ಹುಟ್ಟಿದೆ.
ಆ ಜ್ಯೋತಿಯು ಪ್ರಾಣಲಿಂಗವೆಂದು ಪ್ರಾಣಾಪಾನ
ನಿರೋಧವುಳ್ಳದೆಂದು ಶಿವಯೋಗಿಗಳು ಹೇಳುವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Gurūpadēśadinda prāṇāpāna saṅghaṭṭanavāgi
avudānondu jyōtiyu
nābhikamalada madhyadinda huṭṭide.
Ā jyōtiyu prāṇaliṅgavendu prāṇāpāna
nirōdhavuḷḷadendu śivayōgigaḷu hēḷuvarayya
śāntavīrēśvarā