ಪ್ರಾಣವು ಲಿಂಗದಲ್ಲಿ ವಿಶ್ರಾಂತಿಯು,
ಸೂರ್ಯನಲ್ಲಿ ಹಿಮವು ಲಯವಾಗುವ ಹಾಂಗೆ ಐಯ್ದುವುದು.
ಅದು ಪ್ರಾಣಲಿಂಗವೆಂದು ಉಪದೇಶಿಸುವರು.
ಆ ಲಿಂಗದ ಪ್ರಾಣಲಿಂಗಧಾರಕನು
ಆ ಪ್ರಾಣಲಿಂಗಿಸ್ವರೂಪನಯ್ಯ.
ಅರಿವೆ ಸ್ವರೂಪವಾಗುಳ್ಳ
ಪರಬ್ರಹ್ಮವಾದ ಪ್ರಾಣಲಿಂಗವು ಶಿವಯೋಗದೊಡನೆ
ಕೂಡಿರ್ದ ಶಿವಜ್ಞಾನಿಗಳು ಹೃದಯ ಕಮಲದಲ್ಲಿ
ದೀಪದೋಪಾದಿಯಲ್ಲಿ ಪ್ರಕಾಶಿಸುತ್ತಿರ್ಪುದು
ಗುರೂಪದೇಶರಹಿತವಾದ ಅಜ್ಞಾನಿಗಳು
ಭಾವಿಸಲಾರರಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Prāṇavu liṅgadalli viśrāntiyu,
sūryanalli himavu layavāguva hāṅge aiyduvudu.
Adu prāṇaliṅgavendu upadēśisuvaru.
Ā liṅgada prāṇaliṅgadhārakanu
ā prāṇaliṅgisvarūpanayya.
Arive svarūpavāguḷḷa
parabrahmavāda prāṇaliṅgavu śivayōgadoḍane
kūḍirda śivajñānigaḷu hr̥daya kamaladalli
dīpadōpādiyalli prakāśisuttirpudu
gurūpadēśarahitavāda ajñānigaḷu
bhāvisalārarayya śāntavīrēśvarā