ಶಿವಧರ್ಮವೆಂಬ ನಾಡಿಯೊಡನೆ ಕೂಡಿದ
ಸುಜ್ಞಾನವೆಂಬ ದಂಟನುಳ್ಳ
ಕೇಡಿಲ್ಲದಣಿಮಾದ್ಯಷ್ಟೈಶ್ವರ್ಯಂಗಳೆಂಬ
ಅಷ್ಟದಳಂಗಳುಳ್ಳಂತ ಚಂದ್ರಂಗೆ ಸಮಾನವಾದ
ವೈರಾಗ್ಯವೆಂಬ ಲೇಸಾದ ಬೀಜ ಕೋಶವನುಳ್ಳ
ಶ್ರೀರುದ್ರ ಗಣಂಗಳೆಂಬಂಥ ಕಿಂಜಲಕ್ಕಗಳೊಡನೆ ಕೂಡಿದ
ಈ ಹೃತ್ಕಮವನು ಚೆನ್ನಾಗಿ ತಿಳಿದು
ಆ ಹೃತ್ವದ್ಮದ ಮಧ್ಯದಲ್ಲಿ ಜ್ವಲಿಸುತ್ತಿರ್ದ
ಚಂದ್ರ ಸೂರ್ಯಾದಿ ಮಂಡಲಂಗಳಲ್ಲಿರುವ
ಜ್ಞಾನ ಸ್ವರೂಪವಾದ ಪರಮೇಶ್ವರ
ಧ್ಯಾನವಂ ಮಾಡುವದಯ್ಯ ಶಾಂತವೀರೇಶ್ವರಾ