Index   ವಚನ - 510    Search  
 
ಪ್ರಾಣದ ಸಂಚಾರವು ಜೀವನೆನಿಸಿಕೊಂಬುದು. ಲಿಂಗವೆ ಪರಮಾತ್ಮನೆಂದು ಹೇಳಲಾಗಿದೆ. ಆ ಜೀವ ಪರಮಾತ್ಮರಿಬ್ಬರ ಐಕ್ಯವೆಂಬ ವಿಶೇಷವುಂಟು. ಅದೇ ಸಮಾಧಿಯಯ್ಯ ಶಾಂತವೀರೇಶ್ವರಾ