Index   ವಚನ - 558    Search  
 
ಕಾಯ ಬೋಳೋ ಕಪಾಲ ಬೋಳೋ ಹುಟ್ಟುಗೆಟ್ಟುದು ಬೋಳೋ? ಇವಾವವು ಬೋಳಲ್ಲ. ಹುಟ್ಟುಗೆಟ್ಟುದೆ ಬೋಳು. ಅಹಂಕರಿಸದೆ ಕರಣಂಗಳಧೀನವಾಗಿ ಚಲಿಸದೆ ಷಟ್ಚಕ್ರಾಂತಸಹಿತವಾದ ಅಯ್ವತ್ತೆರಡಕ್ಷರವನರಿದಡೆ ಬೋಳಯ್ಯ ಶಾಂತವೀರೇಶ್ವರಾ