ಆಚಾರ ಕರ್ಪರ ಜಡ; ಅದೇನು ಕಾರಣವೆಂದಡೆ,
ಕ್ರಿಯೆಯೊಡನೆ ಕೂಡಿರ್ದುದಾಗಿ ಜಡ.
ವಿಚಾರ ಕರ್ಪರವು ಪಂಗುಳನಂತೆ.
ವಿಚಾರವೆಂದರೆ ಬುದ್ಧಿ.
ಆ ಬುದ್ಧಿ ಆತ್ಮಾಧೀನವಲ್ಲದೆ ಸ್ವತಂತ್ರವಿಲ್ಲ
ಆವಿಚಾರವೆಂದರೆ ಜ್ಞಾನ.
ಆ ಜ್ಞಾನಕ್ಕೆ ವಿಧಿನಿಷೇದಂಗಳಿಲ್ಲವಾಗಿ ನಿರುಪಾಧಿಕವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ācāra karpara jaḍa; adēnu kāraṇavendaḍe,
kriyeyoḍane kūḍirdudāgi jaḍa.
Vicāra karparavu paṅguḷanante.
Vicāravendare bud'dhi.
Ā bud'dhi ātmādhīnavallade svatantravilla
āvicāravendare jñāna.
Ā jñānakke vidhiniṣēdaṅgaḷillavāgi nirupādhikavayya
śāntavīrēśvarā