Index   ವಚನ - 567    Search  
 
ಶಿವನೊಬ್ಬನನ್ನೆ ಆಶ್ರಯಿಸಿ ಏಕಭಕ್ತಾದಿ ವ್ರತವು ನಿತ್ಯವಾದ ಪೂಜೆ ಮೊದಲಾದ ನಿಯಮವು ಶೀಲವೆಂದು ಹೇಳುವರು. ಆ ಶೀಲದಿಂದ ಪುರುಷನು ಶೀಲವಂತನಹನು. ಶಿವನೆ ಉತ್ಕೃ ಪರಂಜ್ಯೋತಿ ಸ್ವರೂಪನಲ್ಲದೆ ಅತಃಪರವಿಲ್ಲ. ಹೀಗೆಂಬ ನಿಷ್ಠೆಯ ಉತ್ಕೃಷ್ಟವಾದಿ ಶೀಲವು. ಆ ಶಿವತತ್ತ್ವ ಜ್ಞಾನವಧಿಕರಿಸಿ ಅರ್ಥ ಕಳತ್ರ ಪುತ್ರರುಗಳಲ್ಲಿಯ ವೈರಾಗ್ಯವೆ ಶೀಲವಯ್ಯ ಶಾಂತವೀರೇಶ್ವರಾ