Index   ವಚನ - 568    Search  
 
ಸುಖವರಿಯದ ಕಾರಣ ಹೆಂಗೂಸು ಸೂಳೆಯಾದಳು. ಲಿಂಗವನರಿಯಾದ ಕಾರಣ ಭಕ್ತ ಶೀಲವಂತನಾದ. ಅದರಿಂದ ಸೂಳೆಗೆ ಸುಖವಿಲ್ಲ, ಭಕ್ತಂಗೆ ಲಿಂಗೈಕ್ಯವಿಲ್ಲ. ಶೀಲವಂತಂಗೆ ನೇಮ ಶೀಲಂಗಳ ಮಾಡಲಾಗದಯ್ಯ ಶಾಂತವೀರೇಶ್ವರಾ