Index   ವಚನ - 566    Search  
 
ಶಿವಲಿಂಗ ಒಂದರಲ್ಲಿಯ ವಿಶೀಷವಾದ ಜ್ಞಾನವೆ ಶೀಲವು. ಶಿವಲಿಂಗ ಧ್ಯಾನ ಒಂದರಲ್ಲಿಯ ವಿಸ್ತಾರವೆ ಶೀಲ. ಆ ಶೀಲಯೋಗ ಉಳ್ಳಾತನೆ ಶಿವತತ್ತತ್ವವನೈದುವ ಲವಲವಿಕೆಯಿಂದ ಶೀಲವುಳ್ಳಾತನೆಂದು ಹೇಳುವರಯ್ಯ. ಶಿವಲಿಂಗದಿಂದ ಭಿನ್ನವಾದ ದೇವತಾಂತರ ಜ್ಞಾನದಲ್ಲಿ ಅಡ್ಡಲಾದ ಮುಖವು ಆವ ಶರಣಂಗೆ ಅತ್ಯಂತ ದೃಢವಾಗಿರ್ದುದು. ಆವಾತನ ಮನೋವ್ಯಾಪರವು ಆ ಶಿವಲಿಂಗದಲ್ಲಿಯೆ ಲಂಪಟವಾಗಿರ್ದುದು. ಆತನನು ಶೀಲವಂತನೆಂದು ಹೇಳುವರಯ್ಯ ಶಾಂತವೀರೇಶ್ವರಾ